ಅಂತಾರಾಷ್ಟ್ರೀಯ

ಕ್ವಾರಂಟೈನ್ ಉಲ್ಲಂಘಿಸಿ ಹಲವರಿಗೆ ಕೊರೊನಾ ಹರಡಿದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ

7th Sep 2021 03:12 PM

ADVERTISEMENT

ಹನೊಯಿ: ಹಲವರಿಗೆ ಕೊರೊನಾ ಸೋಂಕು ತಗುಲಲು ಕಾರಣನಾದ ವ್ಯಕ್ತಿಗೆ ವಿಯೆಟ್ನಾಂ ನ್ಯಾಯಾಲಯ 5 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಲೆ ವಾನ್ ಎಂಬಾತ ಈ ಹಿಂದೆ ಕೊರೊನಾಗೆ ತುತ್ತಾಗಿದ್ದ.

ಇದನ್ನೂ ಓದಿ: ಕೊರೊನಾ ಮಣಿಸಿದ 116 ವರ್ಷದ ಮುದುಕಿ: ಮೂರು ವಾರ ಐಸಿಯುನಲ್ಲಿ ಹೋರಾಟ!

ಆ ಸಂದರ್ಭದಲ್ಲಿ ಕ್ವಾರಂಟೈನ್ ನಲ್ಲಿ ಇರುವುದು ಬಿಟ್ಟು ನಿಯಮ ಉಲ್ಲಂಘಿಸಿ ಸ್ವಚ್ಛಂದವಾಗಿ ತಿರುಗಾಡಿದ್ದ. ಅವನ ಸ್ವಚ್ಛಂದ ತಿರುಗಾಟದಿಂದಾಗಿ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಆ ಸೋಂಕಿತರಲ್ಲಿ ಓರ್ವ ಮೃತಪಟ್ಟಿದ್ದ

ಕಳೆದ ವರ್ಷಕ್ಕಿಂತಲೂ ಭೀಕರವಾಗಿ ಈಗ ಕೊರೊನಾ ಸಾಂಕ್ರಾಮಿಕ ವಿಯೆಟ್ನಾಂನಲ್ಲಿ ಜನರನ್ನು ಬಲಿಪಡೆಯುತ್ತಿದ್ದು, ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಯೆಟ್ನಾಂನಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದ ಅನೇಕ ಮಂಡಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

ADVERTISEMENT

Tags : ಕೊರೊನಾ ಸೋಂಕು ಕ್ವಾರಂಟೈನ್ ವಿಯೆಟ್ನಾಂ Vietnam corona Home quarantine
ADVERTISEMENT

MORE FROM THE SECTION

ADVERTISEMENT