ಕ್ರೀಡೆ

ಉತ್ತರ ಪ್ರದೇಶದಲ್ಲಿ ನವೆಂಬರ್ 19 ರಿಂದ 21 ರವರೆಗೆ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್

9th Sep 2021 01:44 AM

ADVERTISEMENT

ಚೆನ್ನೈ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ) 2021ರ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ದಿನಾಂಕಗಳನ್ನು ಘೋಷಿಸಿದೆ ಮತ್ತು ರೈಲ್ವೆ ಕ್ರೀಡಾ ಪ್ರಚಾರ ಮಂಡಳಿ(ಆರ್‌ಎಸ್‌ಪಿಬಿ) ಹಾಗೂ ಸೇವಾ ಕ್ರೀಡಾ ಪ್ರಚಾರ ಮಂಡಳಿ(ಎಸ್‌ಎಸ್‌ಸಿಬಿ) ಸೇರಿದಂತೆ ಅಂಗಸಂಸ್ಥೆಗಳಿಗೆ ಆಹ್ವಾನ ಕಳುಹಿಸಿದೆ.

ಆಮಂತ್ರಣದ ಪ್ರಕಾರ, ನವೆಂಬರ್ 19 ರಿಂದ 21 ರವರೆಗೆ ಗೊಂಡ(ಉತ್ತರ ಪ್ರದೇಶ)ದ ನವಾಬಗಂಜ್ ನ ನಂದಿನಿ ನಗರ ಕ್ರೀಡಾ ಸಂಕೀರ್ಣ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿಕೆಯಾಗಿದ್ದ 2020 ರ ಚಾಂಪಿಯನ್‌ಶಿಪ್‌ ಅನ್ನು ಫೆಡರೇಶನ್ ಈಗ ಆಯೋಜಿಸಿದೆ.

"ನವೆಂಬರ್ 4 ರೊಳಗೆ ರಾಜ್ಯ ಘಟಕಗಳು ತಮ್ಮ ಪ್ರವೇಶಾತಿಯನ್ನು ಕಳುಹಿಸಬೇಕು. ಕೋವಿಡ್ ಪರಿಸ್ಥಿತಿಯಿಂದಾಗಿ, ಪ್ರತಿಯೊಂದು ಸಂಘವು ಅಗ್ರ ಮೂರು ಹೊರತುಪಡಿಸಿ ಪ್ರತಿ ಶೈಲಿಯಲ್ಲಿ(ಫ್ರೀಸ್ಟೈಲ್, ಗ್ರೀಕೋ-ರೋಮನ್ ಮತ್ತು ಮಹಿಳಾ ಕುಸ್ತಿ) ಗರಿಷ್ಠ 10 ಕುಸ್ತಿಪಟುಗಳನ್ನು ಮತ್ತು ಎರಡು ತರಬೇತುದಾರರನ್ನು ಕಳುಹಿಸುವಂತೆ ಸೂಚಿಸಲಾಗಿದೆ.

ADVERTISEMENT

Tags : Senior Wrestling Nationals November 19 to 21 Uttar Pradesh ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಉತ್ತರ ಪ್ರದೇಶ ನವೆಂಬರ್ 19 ರಿಂದ 21
ADVERTISEMENT

MORE FROM THE SECTION

ADVERTISEMENT