ರಾಜಕೀಯ

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಬಹುತೇಕ ಖಚಿತ: ಸಿಎಂ ಬೊಮ್ಮಾಯಿ

7th Sep 2021 12:31 PM

ADVERTISEMENT

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಅತಂತ್ರವಾಗಿರುವುದರಿಂದ ಜೆಡಿಎಸ್ ಜೊತೆ ಸೇರಿ ಆಡಳಿತ ನಡೆಸುವುದು ಬಹುತೇಕ ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಜೆಡಿಎಸ್ ನಾಯಕರು ನನ್ನನ್ನು ಭೇಟಿ ಮಾಡಿದ್ದು ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಿದ್ದು ನಿಜ, ಹಾಗೆಂದು ವಿವರವಾದ ಮಾತುಕತೆ ನಡೆದಿಲ್ಲ, ಒಟ್ಟಾಗಿ ಹೋಗೋಣ ಎಂದು ಹೇಳಿದ್ದೇನೆ ಎಂದರು.

ಜೆಡಿಎಸ್ ನಾಯಕರು ಕೂಡ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಒಟ್ಟಾಗಿ ಪಾಲಿಕೆಯಲ್ಲಿ ಕೆಲಸ ಮಾಡಲು ಒಲವು ತೋರಿಸಿದ್ದಾರೆ, ಬಹುತೇಕವಾಗಿ ಜೆಡಿಎಸ್ ಮತ್ತು ಬಿಜೆಪಿ ಸೇರಿ ಬಹುಮತ ತೋರಿಸಿ ಆಡಳಿತ ನಡೆಸುತ್ತೇವೆ ಎಂದು ಹೇಳಿದರು.

Tags : Kalaburagi muncipal corporation Bjp Jds CM Basavaraja Bommai ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ಜೆಡಿಎಸ್
ADVERTISEMENT

MORE FROM THE SECTION

ADVERTISEMENT