ದೇಶ

ಟೈಲರ್ ಹತ್ಯೆ: ಅಜ್ಮೀರ್‌ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಧರ್ಮಗುರು ಸೇರಿ ಮೂವರ ಬಂಧನ

Lingaraj Badiger

ಜೈಪುರ: ರಾಜಸ್ಥಾನದ ಅಜ್ಮೀರ್‌ನಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನಕ್ಕೆ ಮಾಡಿದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಶಿರಚ್ಛೇದನ ಮಾಡುವಂತೆ ದ್ವೇಷಪೂರಿತ ಭಾಷಣ ಮಾಡಿದ ಧರ್ಮಗುರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 17 ರಂದು ಅಜ್ಮೀರ್ ದರ್ಗಾದ ಮುಖ್ಯ ಪ್ರವೇಶ ದ್ವಾರದಲ್ಲಿ ಮಾಡಿದ ದ್ವೇಷ ಭಾಷಣವು ಮಂಗಳವಾರ ಉದಯ್‌ಪುರದಲ್ಲಿ ನಡೆದ ಟೈಲರ್‌ ಹತ್ಯೆಗೈ ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಬಂಧಿತ ಮೂವರನ್ನು ಧರ್ಮಗುರು ಫಕರ್ ಜಮಾಲಿ, ರಿಯಾಜ್ ಮತ್ತು ತಾಜಿಮ್ ಎಂದು ಗುರುತಿಸಲಾಗಿದೆ ಎಂದು ದರ್ಗಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಧನ್ವೀರ್ ಸಿಂಗ್ ಅವರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಗೋಹರ್ ಚಿಸ್ತಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ಅವರು ಹೇಳಿದ್ದಾರೆ.

ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರ ಹಂತಕರನ್ನು ಪ್ರಚೋದಿಸುವಲ್ಲಿ ಈ ನಾಲ್ವರ ಪಾತ್ರವಿದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.    

SCROLL FOR NEXT