ಆರೋಗ್ಯ

8 ಮಂದಿ ನಿಪಾ ಶಂಕಿತರ ಪರೀಕ್ಷಾ ಫಲಿತಾಂಶ ನೆಗೆಟಿವ್: ನಿಟ್ಟುಸಿರು ಬಿಟ್ಟ ಕೇರಳ ಆರೋಗ್ಯ ಸಿಬ್ಬಂದಿ

7th Sep 2021 11:43 AM

ADVERTISEMENT

ಕೊಚ್ಚಿ: ಕೊರೊನಾದಿಂದ ತತ್ತರಿಸಿರುವ ಕೇರಳದಲ್ಲಿ ನಿಪಾ ವೈರಾಣು ಬೇರು ಬಿಡುವ ಮುನ್ಸೂಚನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇತ್ತೀಚಿಗೆ ನಿಪಾ ವೈರಾಣುವಿಗೆ ತುತ್ತಾಗಿರುವ ಶಂಕೆ ಬಂದ ಹಿನ್ನೆಲೆಯಲ್ಲಿ 13 ಮಂದಿಯ ಮಾದರಿ ಸಂಗ್ರಹಿಸಿ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿತ್ತು. 

ಅಲ್ಲಿಂದ ಪರೀಕ್ಷಾ ಫಲಿತಾಂಶ ಹೊರಬಂದಿದ್ದು 8 ಮಂದಿಯ ಫಲಿತಾಂಶದಲ್ಲಿ ನೆಗೆಟಿವ್ ವರದಿ ಬಂದಿದೆ. ಇನ್ನೂ 5 ಮಂದಿಯ ಫಲಿತಾಂಶ ಇನ್ನೂ ಬರಬೇಕಿದೆ. 

ಇದನ್ನೂ ಓದಿ: ಕೇರಳದ ಕೋಳಿಕೋಡ್'ನಲ್ಲಿ ನಿಫಾ ವೈರಸ್ ಪತ್ತೆ; 13 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು

ಇತ್ತೀಚಿಗೆ ನಿಪಾದಿಂದ ಮೃತಪಟ್ತ ಬಾಲಕನ ಪೋಷಕರ ಮಾದರಿಯನ್ನೂ ಪುಣೆಗೆ ಕಳಿಸಲಾಗಿತ್ತು. ನೆಗೆಟಿವ್ ವರದಿ ಬಂದಿರುವ ರಿಪೋರ್ಟ್ ಗಳಲ್ಲಿ ಅವರದೂ ಸೇರಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಂತಸ ವ್ಯಕ್ತಪಡಿಸಿದ್ದು ಆರೋಗ್ಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

 

Tags : Nipah Virus Kerala veena george National Institute of Virology ನಿಪಾ ನೆಗೆಟಿವ್ ವರದಿ ವೀಣಾ ಜಾರ್ಜ್ ಆರೋಗ್ಯ ಸಚಿವೆ
ADVERTISEMENT

MORE FROM THE SECTION

ADVERTISEMENT