ಸಿನಿಮಾ ಸುದ್ದಿ

ಅಶ್ವಿನ್ ಗಂಗರಾಜು ನಿರ್ದೇಶನದಲ್ಲಿ 1770 ಸಿನಿಮಾ: ಪ್ಯಾನ್ ಇಂಡಿಯಾ ಚಿತ್ರವಾಗಲಿದೆ ಬಂಕಿಮ ಚಂದ್ರರ 'ಆನಂದಮಠ'!

Shilpa D

ರಾಜಮೌಳಿ ನಿರ್ದೇಶನದ ಈಗ ಮತ್ತು ಬಾಹುಬಲಿ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಶ್ವಿನ್ ಗಂಗರಾಜು ಇದೀಗ 1770 ಎಂಬ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

1770 ಸಿನಿಮಾ ಬಗ್ಗೆ ಆಫೀಶಿಯಲ್ ಆಗಿ ಅನೌನ್ಸ್​ ಆಗಿದೆ. ಬಂಕಿಮ ಚಂದ್ರ ಚಟರ್ಜಿ ಅವರ ಆನಂದಮಠ ಕಾದಂಬರಿ ಆಧರಿಸಿದ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್​ಟೈನ್​ಮೆಂಟ್ ಮತ್ತು ಪಿಕೆ ಎಂಟರ್​ಟೈನ್​ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ನಿರ್ಮಿಸುತ್ತಿದ್ದಾರೆ.

ರಾಜಮೌಳಿ ಅವರ 'ಬಾಹುಬಲಿ', 'ಈಗ' ಸಿನಿಮಾಗಳಿಗೆ ಕೆಲಸ ಮಾಡಿದ್ದ ಅಶ್ವಿನ್, ಈಗ '1770' ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ವಿಶೇಷವೆಂದರೆ, ಬಂಕಿಮ ಚಂದ್ರ ಚಟರ್ಜಿ ಅವರ 'ಆನಂದಮಠ' ಕಾದಂಬರಿಯನ್ನು ಆಧರಿಸಿ '1770' ಸಿನಿಮಾ ಮಾಡಲಾಗುತ್ತಿದೆ.

ಕನ್ನಡ, ಹಿಂದಿ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಎಸ್ಎಸ್1 ಎಂಟರ್‌ಟೇನ್‌ಮೆಂಟ್ ಮತ್ತು ಪಿಕೆ ಎಂಟರ್‌ಟೇನ್‌ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್. ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಖ್ಯಾತ ಲೇಖಕ ಮತ್ತು ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ, ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ಸ್ರಿಪ್ಟ್ ಬರೆಯುತ್ತಿದ್ದಾರೆ.

ಈ ಹಿಂದೆ ತೆಲುಗಿನಲ್ಲಿ 'ಆಕಾಶವಾಣಿ' ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಈಗ '1770' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. 'ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಸ್ಕ್ರಿಪ್ಟ್ ಬರೆಯುತ್ತಿರುವುದರಿಂದ ಈ ಸಿನಿಮಾ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ.

ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್‌ಗಳು ಹೆಚ್ಚಿರುವಂತಹ ಮತ್ತು ಸಾಹಸ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ' ಎನ್ನುತ್ತಾರೆ ಅಶ್ವಿನ್.

'ಬಂಕಿಮ ಚಂದ್ರ ಚಟರ್ಜಿ ಅವರ 'ಆನಂದಮಠ' ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ. ಈ ದೇಶವು ಬ್ರಿಟಿಷರಿಂದ ಅನುಭವಿಸುತ್ತಿದ್ದ ದಾಸ್ಯ ಮತ್ತು ಅನ್ಯಾಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಬಳಸಿದ ಒಂದು ಮಂತ್ರವಾಗಿತ್ತು. ಈ ಚಿತ್ರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅದೆಷ್ಟೋ ಅಜ್ಞಾತ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ ಎಂದು ವಿಜಯೇಂದ್ರ ಪ್ರಸಾದ್ ತಿಳಿಸಿದ್ದಾರೆ.

SCROLL FOR NEXT