ಸಿನಿಮಾ ಸುದ್ದಿ

'ಲವ್ 360' ಸಿನಿಮಾದಲ್ಲಿ ನನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಸಮಯ ಹಿಡಿಯಿತು: ನಟಿ ರಚನಾ ಇಂದರ್

Ramyashree GN

ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್‌ಟೈಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ರಚನಾ ಇಂದರ್, ಹರಿಕಥೆ ಅಲ್ಲ ಗಿರಿಕಥೆಯಲ್ಲಿ ರಿಷಬ್ ಶೆಟ್ಟಿಯೊಂದಿಗೆ ತೆರೆ ಹಂಚಿಕೊಂಡಿದ್ದರು. ಇದೀಗ, ಮೊಗ್ಗಿನ ಮನಸ್ಸು ಖ್ಯಾತಿಯ ಶಶಾಂಕ್ ಅವರ ನಿರ್ದೇಶನದ 'ಲವ್ 360' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಚನಾ ಇಂದರ್
<strong>ರಚನಾ ಇಂದರ್</strong>

'ನಾನು ಸಿನಿಮಾ ರಂಗಕ್ಕೆ ಪ್ರವೇಶಿಸಿದಾಗ, ನಾನು ಪೂರ್ಣ ಪ್ರಮಾಣದ ನಾಯಕಿ ಅಲ್ಲ ಎಂದು ನನಗೆ ತಿಳಿದಿರಲಿಲ್ಲ. ನಾನು ಯೋಚಿಸಿದ್ದು ಕಥೆ ಮತ್ತು ಸಿನಿಮಾಗಳ ಗುಣಮಟ್ಟದ ಬಗ್ಗೆ ಮಾತ್ರ. ಈ ಎರಡು ಚಿತ್ರಗಳು ಮತ್ತು ಇನ್ನೂ ಬಿಡುಗಡೆಯಾಗದ ಟ್ರಿಬಲ್ ರೈಡಿಂಗ್ ಕೂಡ ನನ್ನನ್ನು ನಟಿಯಾಗಿ ರೂಪಿಸಲು ಸಹಾಯ ಮಾಡಿತು. ಈಗ ನಿರ್ದೇಶಕ ಶಶಾಂಕ್ ಅವರು ನನ್ನನ್ನು ನಾಯಕಿಯನ್ನಾಗಿ ಪರಿಚಯಿಸುತ್ತಿರುವುದು ನನಗೆ ಖುಷಿ ತಂದಿದೆ ಎಂದು ನಾಯಕನಾಗಿರುವ ಪ್ರವೀಣ್ ಎದುರು ಜೋಡಿಯಾಗಿರುವ ರಚನಾ ಹೇಳುತ್ತಾರೆ.

ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಲವ್ 360 ಆಗಸ್ಟ್ 19ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಚನಾ, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಆರಂಭದಲ್ಲಿ ನನಗೆ ಪಾತ್ರವೇ ಅರ್ಥವಾಗಿರಲಿಲ್ಲ. ಆದಾಗ್ಯೂ, ಶಶಾಂಕ್ ಅವರ ಕಾರ್ಯಾಗಾರಗಳು ಮತ್ತು ಕೆಲವು ಚಲನಚಿತ್ರಗಳನ್ನು ಗಮನಿಸಿದಾಗ ಈ ಪಾತ್ರದೊಂದಿಗೆ ಸಂಪರ್ಕ ಸಾಧಿಸಲು ನನಗೆ ಸಹಾಯವಾಯಿತು. ಇಲ್ಲದಿದ್ದರೆ, ಈ ಪಾತ್ರವು ಕಷ್ಟವಾಗುತ್ತಿತ್ತು. ಶೂಟಿಂಗ್ ಇಲ್ಲದಿದ್ದರೂ ಕೂಡ ಆ ಪಾತ್ರ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿದೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿನ ಗಿರಿಜಾ ಮತ್ತು ಲವ್ 360 ನಲ್ಲಿನ ಜಾನು ಪಾತ್ರವು ನನಗೆ ಸಾಕಷ್ಟು ಮಾತನಾಡುವ ಆತ್ಮವಿಶ್ವಾಸವನ್ನು ನೀಡಿದೆ. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ನನ್ನ ಪಾತ್ರವು ತುಂಬಾ ವಿಶೇಷವಾಗಿದೆ' ಎನ್ನುತ್ತಾರೆ ರಚನಾ.

'ನನ್ನ ವೃತ್ತಿಜೀವನದ ಆರಂಭದಲ್ಲಿಯೇ ಇಂತಹ ಸವಾಲಿನ ಪಾತ್ರವನ್ನು ನಿರ್ವಹಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಬರ್ಫಿ ಸಿನಿಮಾದಲ್ಲಿನ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವು ಲವ್ 360 ಸಿನಿಮಾದಲ್ಲಿ ನಟಿಸಲು ನನಗೆ ಸ್ಫೂರ್ತಿಯಾಗಿದೆ' ಎಂದು ಹೇಳುತ್ತಾರೆ ರಚನಾ ಇಂದರ್.

ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ಅಭಿಲಾಶ್ ಕಲಾಥಿ ಅವರ ಛಾಯಾಗ್ರಹಣವಿದೆ. ಸಿನಿಮಾದ ಜಗವೇ ನೀನು ಗೆಳತಿಯೇ ಹಾಡು ಸಾಕಷ್ಟು ಯಶಸ್ಸನ್ನು ಪಡೆದಿದೆ. ಲವ್ 360 ಸಿನಿಮಾದ ಹೊರತಾಗಿ ನಟ ಗಣೇಶ್ ಅವರೊಂದಿಗೆ ಟ್ರಿಬಲ್ ರೈಡಿಂಗ್‌ನ ಸಿನಿಮಾದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ರಚನಾ ನಟಿಸುತ್ತಿದ್ದಾರೆ.

SCROLL FOR NEXT