ಸಿನಿಮಾ ಸುದ್ದಿ

'ದಾರಿ ಯಾವುದಯ್ಯಾ ವೈಕುಂಠಕೆ' ಸಿನಿಮಾಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯ ಸುರಿಮಳೆ

Raghavendra Adiga

ಮಹಾರಾಷ್ಟ್ರದ ಪುಣೆ ಯಲ್ಲಿ ನಡೆದ "ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರಕಥೆಗೆ "ಬೆಸ್ಟ್ ಸ್ಕ್ರೀನ್ ಪ್ಲೇ" ಅವಾರ್ಡ್ ಬಂದಿದೆ.

ಇದರ ಜೊತೆಗೆ "ಸ್ಪೇನ್" ನಲ್ಲಿ ನಡೆಯುವ ಬಾರ್ಸೆಲೋನಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶನ ಪ್ರಶಸ್ತಿಗಾಗಿ ಬೇರೆ ಬೇರೆ ದೇಶದ ನಿರ್ದೇಶಕರ ಜೊತೆ ಸ್ಪರ್ಧೆಗಿಳಿದು ಕೊನೆಗೂ "ಅತ್ಯುತ್ತಮ ನಿರ್ದೇಶಕ" ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ.

“ನಾವ್ಡಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 1600 ಸಿನಿಮಾಗಳ ಪೈಕಿ ನನಗೇ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ತಂದಿತು. ಲಂಡನ್ ಇಂಡಿಪೆಂಡೆಂಟ್ ಫಿಲ್ಮ ಫೆಸ್ಟಿವಲ್ ನಲ್ಲಿ ಬೆಸ್ಟ್ ಆ್ಯಕ್ಟರ್ ಮತ್ತು ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಸಿಕ್ಕಿದೆ” ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಲಂಡನ್ ಇಂಡಿಪೆಂಡೆನ್ಸ್ ಪಿಲ್ಮ ಫೆಸ್ಟಿವಲ್ ನಲ್ಲಿ ಬೆಸ್ಟ್ ಆ್ಯಕ್ಟರ್ ಮತ್ತು ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಬಂದಿದೆ.

ರೇ(ಸತ್ಯಜಿತ್‌ ರೇ) ಸಿನಿಮೋತ್ಸವದಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಆ್ಯಂಡ್ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಬಂತು. ಮುಂಬೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನನಗೆ ಬೆಸ್ಟ್ ರೈಟರ್ ಅವಾರ್ಡ್ ದೊರಕಿತು. ಮೊದಲ ವರ್ಷ್ ಕಾಶಿ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯತ್ತಮ "ಚಿತ್ರಕಥೆ ಮತ್ತು ಸಂಭಾಷಣೆ"ಗೆ ಅವಾರ್ಡ್ ಬಂದಿದೆ ಎಂದಿದ್ದಾರೆ.

ಏಷ್ಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟನೆಗೆ ನಾಯಕ ನಟ ವರ್ಧನ್ ರವರಿಗೂ ಪ್ರಶಸ್ತಿ ಬಂದಿದೆ.

ಸ್ಯಾಂಡ್ ಡ್ಯಾನ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಪೋರ್ಟ್ ಬ್ಲೇರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗೋಲ್ಡನ್ ಗುಬ್ಬಚ್ಚಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಉರುವಾಟ್ಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ರಾಮೇಶ್ವರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಕ್ರೌನ್ ವುಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ವ್ಯಾಲೆಟ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಗೊನ್ನಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಡ್ರುಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಬಿಳಿ ಯುನಿಕಾರ್ನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಓಯಸಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಅಕಾರ್ಡ್ ಸಿನಿ ಫೆಸ್ಟ್, ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಟ್ಯಾಗೋರ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಇನ್ನೂ ಹಲವು ಚಲನಚಿತ್ರೋತ್ಸವಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ವರ್ಧನ್, ಬಲ ರಾಜ್ವಾಡಿ, ಶೀಬಾ ಮೂರ್ತಿ,ಸಿದ್ದು ಪೂರ್ಣಚಂದ್ರ, ರವರಿಗೆ ಪ್ರಶಸ್ತಿ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಪ್ರಶಸ್ತಿಯು ನೂರರ ಗಡಿ ದಾಟಲಿದೆ.

SCROLL FOR NEXT